ಕನ್ನಡ ನಾಡು-ನುಡಿ ಸಂ-ಜಗ-ಭಾಷೆ ಹಾಗೂ ಕನ್ನಡಿಗರ ಆಪ್ತೈಕ ಈ ಸಂಘಟನೆಯ ಮುಖ್ಯ ಧ್ಯೇಯ

1.
ಕನ್ನಡ ನಾಡು ನುಡಿ ನೆಲ ಜಲ ಭಾಷೆ ವಿಚಾರವಾಗಿ ಯಾರಿಂದಾದರೂ ಧಕ್ಕೆ ಬಂದರೆ ಕೂಡಲೇ ರಾಜ್ಯದ್ಯಂತ ಪ್ರತಿಭಟನೆ ಮಾಡುವುದು ಈ ಸಂಘಟನೆಯು ಯಾವುದೇ ಪಕ್ಷ ಯಾವುದೇ ಇತರೆ ಸಂಘ ಸಂಸ್ಥೆಗಳು ನಮ್ಮೊಂದಿಗೆ ಬರಬಹುದು ಆದರೆ ನಾವುಗಳು ಯಾರಂದಿಗೂ ಜೋಡಿಸಿ ಕೊಳ್ಳಬಾರದು.
2.
ಭ್ರಷ್ಟ ಅಧಿಕಾರಿಗಳು ಹಾಗೂ ಯಾವುದೇ ಜಿಲ್ಲೆಯಲ್ಲಿನ ಯಾವುದೇ ಕನ್ನಡಿಗರಿಗೆ ಹಾಗೂ ರೈತರಿಗೆ ಅಪಮಾನ ಅಥವಾ ವ್ಯಕ್ತಿತ್ವಕ್ಕೆ ಧಕ್ಕೆಯಾದರೆ ಕೂಡಲೇ ಕಾರ್ಯ ಪ್ರವೃತ್ತರಾಗಿ ರಾಜ್ಯಾದ್ಯಂತ ಪ್ರತಿಭಟಿಸುವುದು.
3.
ಮಹಿಳೆಯರ ಸಬಲೀಕರಣಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಹಾಗೂ ತಾಲ್ಲೂಕುಗಳಲ್ಲಿ ಮಹಿಳಾ ಘಟಕ ಹಾಗೂ ಮಹಿಳೆಯರಿಗೆ ಸಿಗಬೇಕಾದಂತ ಸರ್ಕಾರದ ಸವಲತ್ತುಗಳನ್ನು ಸಿಗಲು ನೆರವಾಗುವುದು.
4.
ಪ್ರಕೃತಿ ವಿಕೋಪ, ನೆರೆ ಹಾವಳಿ, ಬರ ಹಾಗೂ ಜಲಕ್ಷಾಮ ಸಮಸ್ಯೆಗಳು ರಾಜ್ಯದ ಯಾವುದೇ ಜಿಲ್ಲೆಯಲ್ಲಾದರೂ ಸಹಾಯಕ್ಕೆ ಧಾವಿಸುವುದು.
5.
ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಪ್ರತಿ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ನಿಗದಿತ ದಿನಾಂಕದಂದು ಏರ್ಪಡಿಸುವುದು ಹಾಗೂ ಅದ್ದೂರಿಯಾಗಿ ಆಚರಿಸುವುದು ಅದಕ್ಕೆ ಬೇಕಾದಂತ ಸಂಪನ್ಮೂಲಗಳನ್ನು ಕ್ರೂಢೀಕರಿಸುವುದು ಹಾಗೂ ರಾಜ್ಯ ಪದಾಧಿಕಾರಿಗಳ ಅಧ್ಯಕ್ಷತೆ ಯಲ್ಲಿ ನಡೆಸುವುದು ಕಡ್ಡಾಯವಾಗಿರುತ್ತದೆ.
6.
ಜಿಲ್ಲಾಧ್ಯಕ್ಷರು 1500 ಸದಸ್ಯರನ್ನು ಸಂಘಕ್ಕೆ ಸೇರಿಸುವುದು ಕಡ್ಡಾಯವಾಗಿರುತ್ತದೆ ಇದನ್ನು ಪ್ರತಿ ಜಿಲ್ಲಾಧ್ಯಕ್ಷರು ಮಾಡಲೇಬೇಕಾಗಿರುತ್ತದೆ.
7.
ತಾಲ್ಲೂಕು ಅಧ್ಯಕ್ಷರು 1000 ಜನ ಸದಸ್ಯರನ್ನು ಸೇರಿಸುವುದು ಕಡ್ಡಾಯವಾಗಿರುತ್ತದೆ ಇದನ್ನು ಪ್ರತಿ ಜಿಲ್ಲಾಧ್ಯಕ್ಷರು ಮಾಡಲೇಬೇಕಾಗಿರುತ್ತದೆ.
8.
ಜಿಲ್ಲಾ ಅಧ್ಯಕ್ಷರ ಸಮಿತಿಯಲ್ಲಿನ ಸಂಘಟನೆ ವಾಟ್ಸಪ್ ಗ್ರೂಪ್ಗಳು ಹಾಗೂ ಜೂಮ್ ಮೀಟಿಂಗ್ ಮಾಡಲು ಮಾಡಬಹುದಾದಂತ ಎಲ್ಲಾ ಕಾರ್ಯಕ್ರಮಗಳ ಗ್ರೂಪ್ಗಳನ್ನು ರಚಿಸುವುದು ಹಾಗೂ ಪ್ರತಿ ತಿಂಗಳಿಗೆ ಎರಡು ಬಾರಿಯಂತೆ ಸಂಘಟನೆ ವಿಚಾರವಾಗಿ ಚರ್ಚಿಸುವುದು ಹಾಗೂ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಇದೆಲ್ಲದರ ವರದಿಯನ್ನು ರಾಜ್ಯ ಕಚೇರಿಗೆ ತಲುಪಿಸುವುದು ಇದು ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕು ಅಧ್ಯಕ್ಷರ ಮೂಲ ಕರ್ತವ್ಯವಾಗಿರುತ್ತದೆ.
9.
1000 ರೂಪಾಯಿ ನೀಡಿ ಸದಸ್ಯತ್ವ ಪಡೆದ ಸದಸ್ಯರಿಗೆ ಕಡ್ಡಾಯವಾಗಿ ಆರೋಗ್ಯ ವಿಮೆಯನ್ನು ಸ್ಥಳೀಯ ಅಂಚೆಕಚೇರಿಯಲ್ಲಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ರಶೀದಿ ನೀಡುವುದು ಕಡ್ಡಾಯವಾಗಿರುತ್ತದೆ ಹಾಗೂ ಎಲ್ಲ ಹಣಕಾಸಿನ ವ್ಯವಹಾರವನ್ನು ಬ್ಯಾಂಕ್ ಮುಖಾಂತರವೇ ನಡೆಸುವುದು ಕಡ್ಡಾಯವಾಗಿರುತ್ತದೆ.
10.
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ- ಬೆಂಗಳೂರು (ರಿ)ಯು ತನು-ಮನ ಹಾಗೂ ನಿಸ್ವಾರ್ಥ ವಾಗಿ ಕನ್ನಡಿಗರ ಅಸ್ಮಿತೆಗಾಗಿ ಹೋರಾಡುವ ಸಂಘಟನೆ ಎಂದು ಸದಾ ತಿಳಿದಿರಬೇಕು. ಹಾಗೂ ಅದು ನಮ್ಮ ಧ್ಯೇಯ ವಾಕ್ಯ
11.
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ- ಬೆಂಗಳೂರು (ರಿ)ಯ ಈ ಸಂಘಟನೆಗೆ ಚ್ಯುತಿ ಬರುವ, ಕೆಟ್ಟ ಹೆಸರು ತರುವ ಕೆಲಸ ಯಾರೇ ಮಾಡಿದರೂ ಕೂಡಲೇ ಅವರ ಪ್ರಾಥಮಿಕ ಸದಸ್ಯತ್ವ ಹಾಗೂ ಜವಾಬ್ದಾರಿಯಿಂದ ಯಾವುದೇ ಕಾರಣವಿಲ್ಲದೆ ಉಚ್ಚಾಟಿಸಲಾಗುವುದು.
12.
ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ ಗಣೇಶೋತ್ಸವ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ- ಬೆಂಗಳೂರು (ರಿ) ಕಚೇರಿ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕ್ವಾಯವಾಗಿ ತೆರೆದು ಪ್ರತಿ ಕಚೇರಿಯ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ರಾಜ್ಯ ಕಚೇರಿಗೆ ನೀಡುವುದೂ ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕು ಅಧ್ಯಕ್ಷರ ಮೂಲ ಕರ್ತವ್ಯ
13.
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಘಟನೆಯ ನಾಮಫಲಕ ಹಾಗೂ ಹೋಬಳಿ ತಾಲ್ಲೂಕು ಜಿಲ್ಲಾ ಪ್ರಮುಖ ಸ್ಥಳಗಳಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ- ಬೆಂಗಳೂರು (ರಿ) ನಾಮಫಲಕ ಹಾಕಿಸುವುದು ಕಡ್ಡಾಯ. ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕು ಅಧ್ಯಕ್ಷರ ಸಮ್ಮುಖದಲ್ಲಿ ನಡೆಯಬೇಕು.
14.
ಸಂಘಟನೆ ಸದಸ್ಯರು ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ನಾಡಕಚೇರಿ ಹಾಗು ತಾಲ್ಲೂಕು ಕಚೇರಿ, ಸರ್ವೆ ಇಲಾಖೆ, ಕಂದಾಯ ಇಲಾಖೆ, ವಿದ್ಯುತ್ ಇಲಾಖೆ, ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೋಲೀಸ್ ಇಲಾಖೆ ಯಲ್ಲಿನ ಸದಸ್ಯರ ಯಾವುದೇ ಕೆಲಸಗಳಿಗೂ ಹಿಂಜರಿಕೆ ಇಲ್ಲದೆ ಮಾಡುವುದು, ಮಾಡಿರುವ ಕೆಲಸವಾದ ನಂತರ ಜಿಲ್ಲಾ ಸಾಮಾಜಿಕ ಜಾಲತಾಣ ದಲ್ಲಿ ಹಾಗೂ ವಾಟ್ಸಪ್ ಗ್ರೂಪ್ ಗಳಲ್ಲಿ ಎಲ್ಲರಿಗೂ ತಿಳಿವಂತೆ ಮಾಡುವುದು, ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕು ಅಧ್ಯಕ್ಷರ ಮೂಲ ಕರ್ತವ್ಯವಾಗಿದೆ.
15.
ಸಾರ್ವಜನಿಕರೇ ಆಗಿರಬಹುದು ಅಥವಾ ಸಂಘಟನೆಯ ಸದಸ್ಯರಾಗಿರಬಹುದು, ಯಾರೇ ಬಂದು ದೂರು ಹೇಳಿದಾಗ ಅವರಿಂದ ಲಿಖಿತ ರೂಪ ದಲ್ಲಿ ದೂರಿನ ಪ್ರತಿಯನ್ನು ಪಡೆಯುವುದು ಹಾಗೂ ಅದನ್ನು ಕ್ರೂಢೀಕರಿಸುವುದು ಇದು ತುಂಬಾ ಮುಖ್ಯ ನಂತರ ಕಾರ್ಯಪ್ರವೃತ್ತರಾಗಬೇಕು,
16.
ನಾಡು-ಗುಡಿ, ನೆಲ-ಜಲ, ಭಾಷೆ ವಿಚಾರವಾಗಿ ಹೊರತುಪಡಿಸಿ ಪ್ರತಿ ಸದಸ್ಯರು ಸದಸ್ಯತ್ವಕ್ಕೆ ರೂ. 1000/- ನೀಡುವುದು ಕಡ್ಡಾಯ. ನಂತರ ಅವರಿಗೆ ಸ್ಥಳೀಯ ಆರೋಗ್ಯ ವಿಮೆಯನ್ನು ಮಾಡಿಸುವುದು. ಅದರ ಪ್ರತಿಯನ್ನು ರಾಜ್ಯ ಘಟಕಗಳಿಗೆ ಕಳುಹಿಸುವುದು ಕಡ್ಡಾಯವಾಗಿರುತ್ತದೆ
17.
ಪ್ರತಿ ಜಿಲ್ಲೆಗೆ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಜವಾಬ್ದಾರಿಯ ಪ್ರತಿಯನ್ನು ಜಿಲ್ಲಾಧ್ಯಕ್ಷರು ನೀಡುತ್ತಾರೆ ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಅಧ್ಯಕ್ಷರು ನೀಡುತ್ತಾರೆ. ಆದರೆ ಈ ಪ್ರತಿಗಳಲ್ಲಿ ಜಿಲ್ಲಾಧ್ಯಕ್ಷರ ಸಹಿ ಕಡ್ಡಾಯವಾಗಿರುತ್ತದೆ.
18.
ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ಗುರುತಿಸಿ ಉಚಿತವಾಗಿ ನೋಟ್ ಪುಸ್ತಕ ಹಾಗೂ ಇತರೇ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಸಾಮಶಾಗ್ರಿಗಳನ್ನು ನೀಡುವುದು ಹಾಗೂ ವಿದ್ಯಾಭ್ಯಾಸಕ್ಕೆ ನೆರವಾಗುವುದು ಸಂಘಟನೆಯ ಮೂಲ ಉದ್ದೇಶ.
19.
ಮಹಿಳಾ ದಿನಾಚರಣೆಯನ್ನು ಆಚರಿಸಿ, ಸಮಾಜಮುಖಿ ಮಹಿಳೆಯರನ್ನು ಗುರುತಿಸಿ, ಆರ್ಥಿಕ ಸಹಾಯ ಮಾಡುವುದು ಹಾಗೂ ರಾಜ್ಯೋತ್ಸವ ದಂದು ಕವಿಗಳು, ಸಾಹಿತಿಗಳು, ಪೌರಕಾರ್ಮೀಕರು ಹಾಗೂ ದಕ್ಷ ಪೊಲೀಸ್ ಇಲಾಖೆಯ ಪ್ರಾಮಾಣೀಕ ಪೇದೆಗಳು ಹಾಗೂ ಇತರೇ ಸಮಾಜಮುಖಿ ವ್ಯಕ್ತಿತ್ವದ ವ್ಯಕ್ತಿಗಳನ್ನು ಗುರುತಿಸಿ ಅಂತವರನ್ನು ಸನ್ಮಾನಿಸುವುದು ನಮ್ಮ ಮೂಲ ಕರ್ತವ್ಯಗಳಲ್ಲೊಂದು.
20.
ಪ್ರತಿ ಜಿಲ್ಲೆಯಲ್ಲಿ ಸಮಾಜಮುಖಿ ವಕೀಲರನ್ನು ಜಿಲ್ಲಾ ಕಾನೂನು ಸಲಹೆಗಾರನನ್ನಾಗಿ ನೇಮಿಸುವುದು ಪ್ರತಿ ಜಿಲ್ಲಾಧ್ಯಕ್ಷರ ಪ್ರಮುಖ ಕರ್ತವ್ಯಗಳಲ್ಲೊಂದು.