Discover the heart of South India
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ- ಬೆಂಗಳೂರು (ರಿ) ಎಂಬುದು ನಾಡು, ನುಡಿ, ನೆಲ ಮತ್ತು ಜಲವನ್ನು ರಕ್ಷಿಸುವುದರ ಜೊತೆಗೆ ಕನ್ನಡಿಗರ ಅಸ್ಮಿತೆ, ಸ್ವಾಭಿಮಾನ ಮತ್ತು ಹಕ್ಕುಗಳನ್ನು ಕಾಯುವ ಒಂದು ಜನಪರ, ಹೋರಾಟಾತ್ಮಕ ಹಾಗೂ ಸಾಂಸ್ಕೃತಿಕ ಸಂಘಟನೆ.
ಕರ್ನಾಟಕದ ಭೌಗೋಳಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಸ್ತಿತ್ವವನ್ನು ಕಾಪಾಡುವುದು ವೇದಿಕೆಯ ಪ್ರಮುಖ ಧ್ಯೇಯ. ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ವಿಷಯಗಳ ವಿರುದ್ಧ ವೇದಿಕೆ ಸದಾ ಎಚ್ಚರಿಕೆಯಿಂದ ಹೋರಾಟ ನಡೆಸುತ್ತದೆ.
ಕನ್ನಡ ಭಾಷೆಯ ಗೌರವ, ಬಳಕೆ ಮತ್ತು ಬೆಳವಣಿಗೆಗೆ
ವೇದಿಕೆ ಸದಾ ಶ್ರಮಿಸುತ್ತದೆ.
✔ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ
✔ ವ್ಯಾಪಾರ, ಉದ್ಯಮಗಳಲ್ಲಿ ಕನ್ನಡಕ್ಕೆ ಆದ್ಯತೆ
✔ ಶಾಲೆ–ಕಾಲೇಜುಗಳಲ್ಲಿ ಕನ್ನಡದ ಪ್ರಾಮುಖ್ಯತೆ
ಇವುಗಳಿಗಾಗಿ ಹೋರಾಟ ನಡೆಸುತ್ತದೆ.
ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಸಿಗಬೇಕು ಎಂಬುದು
ವೇದಿಕೆಯ ಸ್ಪಷ್ಟ ನಿಲುವು.
✔ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ
✔ ಭೂಮಿ, ವಸತಿ ವಿಷಯಗಳಲ್ಲಿ ಕನ್ನಡಿಗರ ಹಕ್ಕು ರಕ್ಷಣೆ
✔ ಅನ್ಯಾಯಗಳ ವಿರುದ್ಧ ಧ್ವನಿ
ನೀರೇ ಜೀವಾಳ. ಕಾವೇರಿ ಸೇರಿದಂತೆ ರಾಜ್ಯದ ಎಲ್ಲಾ ನದಿ–ಜಲ ಸಂಪತ್ತಿನ ಮೇಲೆ ಕನ್ನಡಿಗರ ಹಕ್ಕನ್ನು ರಕ್ಷಿಸುವುದು ವೇದಿಕೆಯ ಕರ್ತವ್ಯ. ನೀರಿನ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ವೇದಿಕೆ ದಿಟ್ಟ ಹೋರಾಟ ನಡೆಸುತ್ತದೆ.
ಕನ್ನಡಿಗರು ತಲೆ ಎತ್ತಿ ಬದುಕಬೇಕು, ಸ್ವಾಭಿಮಾನದಿಂದ ತಮ್ಮ ನೆಲದಲ್ಲೇ ಗೌರವದಿಂದ ಬದುಕಬೇಕು ಎಂಬುದೇ ವೇದಿಕೆಯ ಮೂಲ ಆಶಯ. ಕನ್ನಡಿಗರ ಮೇಲೆ ನಡೆಯುವ ಯಾವುದೇ ಅವಮಾನ, ದೌರ್ಜನ್ಯ ಅಥವಾ ಅನ್ಯಾಯದ ವಿರುದ್ಧ ವೇದಿಕೆ ಧೈರ್ಯದಿಂದ ನಿಂತು ಹೋರಾಡುತ್ತದೆ.
ಕನ್ನಡಿಗರು ಉದ್ಯೋಗ ಹುಡುಕುವವರಷ್ಟೇ ಅಲ್ಲ,
ಉದ್ಯಮ ನಿರ್ಮಿಸುವವರಾಗಬೇಕು ಎಂಬ ಚಿಂತನೆಯೊಂದಿಗೆ
✔ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ
✔ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ
✔ ಸ್ವಂತ ಜೀವನೋಪಾಯಕ್ಕೆ ಮಾರ್ಗದರ್ಶನ
ನೀಡುತ್ತದೆ.
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ- ಬೆಂಗಳೂರು (ರಿ)
ಯಾವುದೇ ರಾಜಕೀಯ ಲಾಭಕ್ಕಿಂತ
ಜನರ ಹಿತ, ಕನ್ನಡಿಗರ ಹಕ್ಕು ಮತ್ತು ಗೌರವಕ್ಕೆ ಆದ್ಯತೆ ನೀಡುವ
ಒಂದೇ ಒಂದು ಸಂಘಟನೆ.
ಕಷ್ಟದಲ್ಲಿ, ಅನ್ಯಾಯದಲ್ಲಿ, ಹೋರಾಟದಲ್ಲಿ
ಕನ್ನಡಿಗರೊಂದಿಗೆ ಸದಾ ನಿಲ್ಲುವ ಶಕ್ತಿ –
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ- ಬೆಂಗಳೂರು (ರಿ).
ನಾಡು, ನುಡಿ, ನೆಲ, ಜಲ ಮತ್ತು ಅಸ್ಮಿತೆಯ ರಕ್ಷಣೆಯ ಜೊತೆಗೆ
ಕನ್ನಡಿಗರನ್ನು ಸ್ವಾಭಿಮಾನಿ, ಸ್ವಾವಲಂಬಿ ಮತ್ತು ಶಕ್ತಿಶಾಲಿಗಳನ್ನಾಗಿ
ಮಾಡುವ ಧ್ಯೇಯವೇ
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ- ಬೆಂಗಳೂರು (ರಿ) ಗುರಿ